ಜಾನಪದ ಕಥೆ ಮತ್ತು ಪಾತ್ರಗಳ ಪರಿಶೀಲನೆ
100 ದಿನಗಳು ಓದು ಎಂಬ ಕಾರ್ಯಕ್ರಮದಡಿಯಲ್ಲಿ ಇಂದು, ದಿನಾಂಕ: 29 ಜನವರಿ 2022ರಂದು ನಮ್ಮ ಶಾಲೆಯಲ್ಲಿ 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಥೆಯ ಪುಸ್ತಕವನ್ನು ನೀಡಿ, ಆ ಕತೆಯ ಕುರಿತು ವಿದ್ಯಾರ್ಥಿಗಳ ಮೂಲಕ ಪ್ರಶ್ನೆಗಳನ್ನು ಕೇಳಲಾಯಿತು. ಕಥೆಯನ್ನು ಹೇಳಿದ್ದ ವಿದ್ಯಾರ್ಥಿ ಬೇರೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಪಾತ್ರಗಳ ಕುರಿತು ವಿಮರ್ಶಾತ್ಮಕವಾಗಿ ಉತ್ತರಿಸಿದರು.
4 ಮತ್ತು 5 ನೇ ತರಗತಿಯ ಮಕ್ಕಳಿಗೆ ಜಾನಪದ ಕಥೆಯನ್ನು ಹೇಳಲು ಪ್ರೋತ್ಸಾಹಿಸಲಾಯಿತು ಮತ್ತು ಆ ಕತೆಯಲ್ಲಿ ಬಂದಂತಹ ಪಾತ್ರಗಳ ಬಗ್ಗೆ ಬೇರೆ ವಿದ್ಯಾರ್ಥಿಗಳು ತಾರ್ಕಿಕವಾಗಿ ಚರ್ಚೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Comments
Post a Comment