Posts

Showing posts from July, 2020

ವಿದ್ಯಾಗಮ

ವಿದ್ಯಾಗಮ ಯೋಜನೆಯ ಕಲಿಕಾ-ಕಾರ್ಯಕ್ರಮದ  ಮುಖ್ಯಾಂಶಗಳು 💐💐💐💐💐 *ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಎಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು*. *ಇದರ ಉದ್ದೇಶ covid-19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವವರಿಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವದಾಗಿದೆ* *ಈಗಾಗಲೇ ಪ್ರತಿಶಾಲೆಯಿಂದ ಮಾರ್ಗದರ್ಶಿ ಶಿಕ್ಷಕರುಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ.* *ತಮ್ಮ ಶಾಲೆಗಳಲ್ಲಿರುವ ಮಕ್ಕಳನ್ನು ಅವರ ವಾಸಸ್ಥಳಕ್ಕನುಗುಣವಾಗಿ( habitations) 3 ಭಾಗಗಳಾಗಿಸಬೇಕು*. 1 ) 1ರಿಂದ 5ನೆ ತರಗತಿ 2 ) 6ರಿಂದ 8ನೆ ತರಗತಿ 3 ) 8ರಿಂದ 10 ನೆ ತರಗತಿ  *ಎಂಬ ಕಾಲ್ಪನಿಕ ಕೊಠಡಿಗಳಾಗಿ ಮಾಡಿಕೊಂಡು 20ರಿಂದ25 ಮಕ್ಕಳಿಗೊಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಬೇಕು* *ಆಯಾಯ ಗುಂಪುಗಳಿಗೆ ನಿಗದಿಪಡಿಸಿದ ಮಾರ್ಗದರ್ಶಿ ಶಿಕ್ಷಕರಿಂದ ಇಲಾಖೆ ಒದಗಿಸುವ  ಪಠ್ಯಪುಸ್ತಕಗಳನ್ನು ಕಲಿಕಾ-ಸಾಮಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಮಾರ್ಗದರ್ಶನ ನೀಡುವುದು*  *ಈಗಾಗಲೇ ಸರ್ಕಾರ 25ರಿಂದ 30% ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದನ್ನು ಹೊರತುಪಡಿಸಿ ಉಳಿದ ಪಠ್ಯವಸ್ತುವನ್ನು ನಮ್ಮ ವಾರ್ಷಿಕ ಕಾರ್ಯಯೋಜನೆಯಂತೆ ಅನುಷ್ಠಾನಗೊಳಿಸಬೇಕು* *ಮಕ್ಕಳು & ಶಿಕ್ಷಕರುಗಳ ಸಂಪರ್ಕ 3 ಕೊಠಡಿಗಳಲ್ಲಿ ವಿಂಗಡಣೆಯಾಗಿರುತ್ತದೆ* 1 )ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ. ಇಲ್ಲಿ internet...